
ವಿಜಯಪುರ – ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪ್ರಿಯಾಂಕಾ ಬನಸೋಡೆ ಅವರು ಪಿಎಚ್ ಡಿ ಪದವಿ ಸ್ವೀಕರಿಸಲಿದ್ದಾರೆ.
ವಿಜಯಪುರ ನಗರದ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವವು ಏಪ್ರಿಲ್ 21ರಂದು ಬೆಳಿಗ್ಗೆ 11-30ಕ್ಕೆ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 86 ವಿದ್ಯಾರ್ಥಿನಿಯರಿಗೆ ಪಿಎಚ್ಡಿ ಪ್ರದಾನ ಮಾಡುವರು. ವ್ಯವಹಾರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪ್ರಿಯಾಂಕಾ ಬನಸೋಡೆ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಎಸ್.ಬಿ. ಕಾಮಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.“ವಿಜಯಪುರ ನಗರದ ಆಯ್ದ ಸ್ಟಾರ್ ಹೋಟೆಲ್ಗಳ ಸೇವಾ ಮಾರ್ಕೆಟಿಂಗ್ ಮಿಶ್ರಣದ ಅಧ್ಯಯನ”ಎಂಬ ಸಂಶೋಧನಾ ವಿಷಯಕ್ಕೆ ಪಿಎಚ್ಡಿ ದೊರೆತಿದೆ. ತಮ್ಮ ಸಂಶೋಧನೆಯಲ್ಲಿ ಐತಿಹಾಸಿಕ ವಿಜಯಪುರ ನಗರದ ಪ್ರವಾಸೋದ್ಯಮ ಹಾಗೂ ಸ್ಟಾರ್ ಹೊಟೇಲ್ ಅಭಿವೃದ್ಧಿಗೆ ಪೂರಕ ಎಂಬ ಅಂಶವನ್ನು ಒಳಗೊಂಡಿದೆ.
ಜನರು, ಪ್ರಕ್ರಿಯೆ ಮತ್ತು ಭೌತಿಕ ಸಾಕ್ಷ್ಯಗಳ ಮಹತ್ವವನ್ನು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ.ಡಾ. ಪ್ರಿಯಾಂಕಾ ಅವರು ಕ್ಷೇತ್ರ ಅಧ್ಯಯನದ ಮೂಲಕ ಹೋಟೆಲ್ ನಿರ್ವಹಣೆ, ಗ್ರಾಹಕರು ಮತ್ತು ಇತರ ಸಂಬಂಧಿತ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅವರ ಸಂಶೋಧನೆಯಲ್ಲಿ ವಿಜಯಪುರ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.ವಿಜಯಪುರ ನಗರದ ಆರ್ಥಿಕ ಬೆಳವಣಿಗೆಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರ ಪ್ರಮುಖವಾಗಿವೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
*ಕೃತಜ್ಞತೆ ವ್ಯಕ್ತಪಡಿಸಿದ ಡಾ. ಪ್ರಿಯಾಂಕಾ*
ತಮ್ಮ ಸಂಶೋಧನೆಗೆ ಸಹಾಯ ಮಾಡಿದ ಮಾರ್ಗದರ್ಶಕರು, ಕುಟುಂಬ ಮತ್ತು ಹೊಟೇಲ್ ಸಂಸ್ಥೆಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಪಿಎಚ್ ಡಿ ಪದವಿ ಪಡೆದಿರುವುದಕ್ಕೆ ಬನಸೋಡೆ ಕುಟುಂಬ ಹಾಗೂ ಸ್ನೇಹಿತರು ಬಂಧು ಬಳಗದವರು ಅಭಿನಂದಿಸಿದ್ದಾರೆ.. ಇನ್ನು ಅವರ ಸಾಧನೆ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪ್ರೇರಣೆಯಾಗಿದ್ದು, ಶ್ರಮ ಮತ್ತು ಸಮರ್ಪಣೆಯ ಮಹತ್ವ ಎತ್ತಿ ತೋರಿಸುತ್ತದೆ.