testtest second

test content
  • About Us
  • Contact us
  • Terms and Conditions
  • Privacy policy
Tuesday, June 9, 2026
Retail
Advertisement
Advertise
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
No Result
View All Result
Namu
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
Nammura Suddi
Home Blog

ಏಪ್ರಿಲ್ 20 ಕ್ಕೆ ಯುವೋತ್ಸವ- ಉದ್ಯೋಗ ಮೇಳ 2026 ಆಯೋಜನೆ: ಡಾ. ಸಿ.ಎನ್. ಅಶ್ವತ್ಥ್ ನಾರಾಯಣ..!

by nammurasuddi Online
April 13, 2026
in Blog

YOU MAY ALSO LIKE

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ಬೆಂಗಳೂರು: ಬಸವ ಜಯಂತಿಯ ಅಂಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಶನ್ ಸಹಯೋಗದಲ್ಲಿ ಯುವೋತ್ಸವ- ಉದ್ಯೋಗ ಮೇಳ 2026 ಅನ್ನು ಮಲ್ಲೇಶ್ವರಂನ ಎಸ್‍ಎಚ್‍ವಿಎನ್‍ಎಂ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಶಾಸಕರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು. ಮಲ್ಲೇಶ್ವರಂನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ನೀಡಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ನಾವು ಪೂಜಿಸುತ್ತೇವೆ, ಆರಾಧಿಸುತ್ತೇವೆ. ಆದ್ದರಿಂದ ಅವರ ಜಯಂತಿಯ ಅಂಗವಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು. ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉದ್ಯೋಗಮೇಳವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಇದರಿಂದ ಸಾಕಷ್ಟು ಉದ್ಯೋಗಾಕಾಂಕ್ಷಿಗಳಿಗೆ ಸಹಾಯವಾಗಿದೆ. ಈ ಬಾರಿ ಬೆಳಗ್ಗೆ̇ 8.30 ರಿಂದ ಸಂಜೆ 4.30 ಉದ್ಯೋಗ ಮೇಳ ಆಯೋಜನೆ ಮಾಡಿದ್ದೇವೆ. ಸರ್ವರಿಗೂ ಉದ್ಯೋಗ ಎಂಬ ಧ್ಯೇಯವಾಕ್ಯದಲ್ಲಿ ಈ ಉದ್ಯೋಗಮೇಳವು ನಡೆಯಲಿದೆ. ಭಾರತ್ ಕರಿಯರ್ ಕನೆಕ್ಟ್ ಈ ಮೇಳಕ್ಕೆ ಕೈ ಜೋಡಿಸಿದೆ ಎಂದರು. ಯುವ ಸಬಲೀಕರಣಕ್ಕೆ ಸಹಾಯವಾಗಬಲ್ಲ ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗಮೇಳ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆ ಇವುಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು. ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ನೇರಸಂವಾದ, ನೇಮಕಾತಿ, ವೃತ್ತಿ ಅನ್ವೇಷಣೆಗೆ ಸಾಮಾನ್ಯ ವೇದಿಕೆಯನ್ನು ಈ ಮೇಳ ಒದಗಿಸಲಿದೆ. ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ ಮತ್ತು ಸೇವಾ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದರು. ಈ ಮೇಳ ಸುಮಾರು 5000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ವೇದಿಕೆ ಒದಗಿಸಲಿದೆ. ಪಿಯುಸಿ, ಐಟಿಐ, ಡಿಪೆÇ್ಲೀಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಹತೆ ಇರುವವರು, ಸದ್ಯ ಈ ಕೋರ್ಸ್ ಮಾಡುತ್ತಿರುವವರು ಭಾಗವಹಿಸಬಹುದು. ಕನಿಷ್ಠ ಸಾವಿರ ಆಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ, ಕೌಶಲ್ಯ ಉನ್ನತೀಕರಣ, ಪ್ರಶಿಕ್ಷಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ, ಜೀವನೋಪಾಯ ಮತ್ತು ಇತರ ಕ್ಷೇತ್ರಗಳಲ್ಲಿ ಯುವಕರಿಗೆ ಅನುಕೂಲ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು. ಈ ಮೇಳದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರು ಮಾತ್ರವಲ್ಲದೇ ಎಲ್ಲಾ ಕಡೆಯವರು ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉಟೋಪಚಾರ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುವುದು. ಅಂಗವಿಕಲರಿಗೂ ಉದ್ಯೋಗ ಅವಕಾಶದ ಮಾಹಿತಿ ನೀಡಲಾಗುವುದು ಎಂದರು. ಕೇವಲ ಓದಿದರೆ ಸಾಲದು, ಏನನ್ನೂ ಓದಬೇಕು, ಯಾಕೆ ಓದಬೇಕು ಮುಂತಾದವುಗಳ ಬಗ್ಗೆ ಕರಿಯರ್ ಕೌನ್ಸೆಲಿಂಗ್ ಮಾಡಲಾಗುವುದು. ಕೇವಲ ಓದಿದರೆ ಸಾಲದು. ಜ್ಞಾನ ಮತ್ತು ಬದುಕಿಗಾಗಿ ಓದಬೇಕು. ಪದವಿ ಇದ್ದರೂ ಕೌಶಲ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಈ ಬಗ್ಗೆ ಅರಿವು ನೀಡಲಾಗುವುದು. ಉದ್ಯಮಿಯಾಗಬಯಸುವವರಿಗೂ ಈ ಮೇಳದಲ್ಲಿ ತಿಳಿವಳಿಕೆ ನೀಡಲಾಗುವುದು ಎಂದರು. ಭಾರತ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಪ್ರಧಾನಿಯವರು ಉದ್ಯೋಗದಾತರಾಗಿ ಅಂತ ಪ್ರೇರಣೆ ನೀಡುತ್ತಾರೆ. ಅದಕ್ಕೆ ಪೂರಕವಾಗಿ ನಾವು ಈ ಮೇಳ ಆಯೋಜನೆ ಮಾಡಿದ್ದೇವೆ. ಸ್ವಂತ ಕಾಲಮೇಲೆ ನಿಲ್ಲಬೇಕು ಹಾಗೂ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಯಸುವವರಿಗೆ ಅವಕಾಶಗಳಿವೆ ಎಂದರು. ಮುಂದಿನ ಸೋಮವಾರದಿಂದಲೇ ಐದು ವಿಭಾಗದಲ್ಲಿ ಆನ್‍ಲೈನ್‍ನಲ್ಲಿ ಮಾಹಿತಿ ನೀಡಲಾಗುವುದು. ಉದ್ಯೋಗ ಮೇಳದಂದು ಹ್ಯಾಕಥಾನ್ ಸಹ ಇದೆ. ಖ್ಯಾತ ಉದ್ಯಮಿಗಳು ಮಾಹಿತಿ ನೀಡಲಿದ್ದಾರೆ ಎಂದರು. ಉದ್ಯೋಗ ಮೇಳದಲ್ಲಿ ಭಾರತ ಸರ್ಕಾರದಿಂದ ಪ್ರಾದೇಶಿಕ ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಜನಶಿಕ್ಷಣ ಸಂಸ್ಥಾನ್, ಎನ್‍ಎಸ್‍ಡಿಐ, ಪ್ರಧಾನ ಮಂಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಅಂಚೆ ಇಲಾಖೆ ಸೇರಿದಂತೆ ವಿವಿಧ ಸ್ಟಾಲ್‍ಗಳು ಇರಲಿವೆ ಎಂದರು….

Share197Tweet123

Search

No Result
View All Result

Recent News

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ

Nammura Suddi

ನಮ್ಮೂರ ಸುದ್ದಿ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಜಗತ್ತಿನ ಪ್ರಮುಖ ಸುದ್ದಿಗಳನ್ನು ನಿಖರವಾಗಿ ತಲುಪಿಸುತ್ತದೆ.
ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ನಮ್ಮೂರಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇವೆ.
ಸತ್ಯ ಮತ್ತು ನಿಷ್ಪಕ್ಷಪಾತತೆಯೇ ನಮ್ಮ ಗುರುತು.

Recent News22

  • ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ
  • ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!
  • ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ
  • ಮಹಿಳಾ ಮೀಸಲಾತಿ ಸಂಭ್ರಮದ ಕ್ಷಣ: ಮಾಳವಿಕಾ ಅವಿನಾಶ್
  • “ರುದ್ರ ಕಾಲ” ಚಿತ್ರಕ್ಕೆ ದಿಗಂತ್ ನಾಯಕ ‌ ‌‌‌

Quick Links

dfef
  • About Us
  • Contact us
  • Terms and Conditions
  • Privacy policy

© 2026 Nammura Sudhi. All Rights Reserved. Developed by Onecorpus Techworks

No Result
View All Result
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ

© 2026 Nammura Sudhi. All Rights Reserved. Developed by Onecorpus Techworks