testtest second

test content
  • About Us
  • Contact us
  • Terms and Conditions
  • Privacy policy
Tuesday, June 9, 2026
Retail
Advertisement
Advertise
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
No Result
View All Result
Namu
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
Nammura Suddi
Home Blog

ಅಸಂಘಟಿತ ಕಾರ್ಮಿಕರಿಗೆ ಪ್ರಥಮ ಆದ್ಯತೆ : ಸಂಸದ ಬಿ ವೈ ರಾಘವೇಂದ್ರ ಅಭಿಮತ …

by nammurasuddi Online
April 9, 2026
in Blog

ಶಿವಮೊಗ್ಗ : ದೇಶ ಸಮೃದ್ಧಿ ಯಾದಾಗ ನಾವೆಲ್ಲರೂ ಸಮೃದ್ಧಿಯಾಗು ತ್ತೇವೆ. ಸೈನಿಕರು ಆರೋಗ್ಯದಿಂದ ಇದ್ದರೆ ನಾವೆಲ್ಲರೂ ನೆಮ್ಮದಿಯ ನಿದ್ರೆ ಮಾಡಲು ಸಾಧ್ಯ. ನಾವು ಸದಾ ದೇಶ ಕಾಯುವ ಸೈನಿಕ ಮತ್ತು ರೈತ ಹಾಗೂ ತನ್ನ ಸ್ವಾಭಿ ಮಾನದ ಶ್ರಮದಿಂದ ದೇಶಕ್ಕೆ ಸೇವೆ ಸಲ್ಲಿಸುವ ಅಸಂಘಟಿತ ಕಾರ್ಮಿಕರಿಗೆ ಮೊದಲ ಸ್ಥಾನ ನೀಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಅವರು ಇಂದು ನಗರದ ದುರ್ಗಿ ಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೆಲ್ತ್‌ಕೇರ್‌ನಲ್ಲಿ ಶಿವಮೊಗ್ಗ ಜಿಲ್ಲಾ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ಹಮ್ಮಿ ಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಇ-ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು.

ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ ಹಗೂ ಒಳ್ಳೆಯ ಕೆಲಸ ಮಾಡು ವವರಿಗೆ ಕೈಜೋಡಿಸುವುದೇ ಶ್ರೇಷ್ಠದಾನ ವಾಗಿದೆ ಎಂದು ಶೃಂಗೇರಿ ಶ್ರೀಗಳು ಆಶೀ ರ್ವಚನದಲ್ಲಿ ಹೇಳಿದ್ದರು. ತೃಪ್ತಿ ಕ್ಲಿನಿಕ್‌ ಡಾ|| ಚಂದ್ರಶೇಖರ್ ಅವರು ಕಳೆದ 2ವರ್ಷಗಳಿಂದ ಸಾವಿರಾರು ಅಸಂಘಟಿತ ಕಾರ್ಮಿಕರಿಗೆ ಮತ್ತು ಬಡವರಿಗೆ ಉಚಿತ

YOU MAY ALSO LIKE

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ವಾಗಿ ಸಾವಿರಾರು ರೂ.ಗಳ ವೆಚ್ಚದ ಚಿಕಿತ್ಸೆ. ಯನ್ನು ಮತ್ತು ವಿವಿಧ ತಪಾಸಣಾ ಸೌಲಭ್ಯಗಳನ್ನು ನೀಡುತ್ತಿದ್ದು ಅಪರೂಪದ ವೈದ್ಯರಾಗಿದ್ದಾರೆ ಎಂದರು.

ದೇಶ ಕಾಯುವ ಕಾಯಕಯೋಗಿ ಮೋದಿಜೀ ಅವರು, ಈ ಅಸಂಘಟಿತ ಕಾರ್ಮಿಕರಿಗಾಗಿಯೇ ಇ-ಶ್ರವರ್ ಕಾರ್ಡ್ ಯೋಜನೆಯನ್ನು ತಂದಿದ್ದಾರೆ. ಹುಟ್ಟಿನಿಂದ ಸಾವಿನವರೆಗೆ ಈ ಕಾರ್ಡ್ ನಿಂದ ಕಾರ್ಮಿಕನ ಕುಟುಂಬಕ್ಕೆ ವಿವಿಧ ರೀತಿಯ ನೆರವು ಲಭ್ಯವಾಗಲಿದೆ. ಈಗಾ ಗಲೇ ಇ-ಶ್ರಮ್ ಪೋರ್ಟಲ್‌ನಲ್ಲಿ 33 ಕೋಟಿ ಕಾರ್ಮಿಕರು ನೋಂದಣಿ ಮಾಡಿ ದ್ದಾರೆ. ತಿಂಗಳಿಗೆ 50 ರೂ. ಕಟ್ಟಿದರೆ 45 ವರ್ಷದ ನಂತರ ಅವರಿಗೆ 4000 ರೂ. ಪಿಂಚಣಿ ಬರುವ ಯೋಜನೆ ನೀಡಿದ್ದಾರೆ.

ಮೋದಿಯವರ ಕನಸಿನಂತೆ ಉದ್ಯೋಗ ಸೃಷ್ಟಿಗೆ ಅನೇಕ ಕಾರ್ಯಕ್ರಮ ಕೈಗೊಂಡಿದ್ದು, ಜಪಾನ್ ದೇಶದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಚಾಲ ಕರು ಮತ್ತು ನರ್ಸ್‌ಗಳಿಗೆ ಅಲ್ಲಿ ವಿಪರೀತ ಬೇಡಿಕೆಯಿದ್ದು, ಜಪಾನ್ ಭಾಷೆ ಕಲಿತರೆ ಸಾಕು ಅಲ್ಲಿಗೆ ಅವರಿಗೆ ವೀಸಾ ನೀಡಿ, ತಿಂಗಳಿಗೆ ಮೂರು ಲಕ್ಷ ರೂ. ಸಂಬಳ ನೀಡುತ್ತಾರೆ. ಈಗಾಗಲೇ ನನ್ನ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಿಂದ 200 ಜನ ರಿಗೆ ಕಳುಹಿಸಲಾಗಿದೆ. ಶಿವಮೊಗ್ಗದವರು ಕೂಡ ಸಂಪರ್ಕಿಸಬಹುದು ಎಂದರು.

ಯುದ್ಧ ನಡೆಯುತ್ತಿದೆ. ಎಷ್ಟೇ ಶ್ರೀಮಂತರಾದರೂ ಬಾಂಬ್ ದಾಳಿಗೆ ಒಳಗಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 600 ರೂ. ಆಗಿದೆ. ಮೋದಿಜಿ ಆಶೀರ್ವಾದದಿಂದ ಶಿವ ಮೊಗ್ಗದ ಜನತೆಗೆ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ ಎಂದರು.

ಡಾ|| ಚಂದ್ರಶೇಖರ್ ಮಾತನಾಡಿ, ಕಿಡ್ನಿ ಮತ್ತು ಮೂತ್ರಕೋಶದ ಚಿಕಿತ್ಸೆ ಪ್ರತೀ ಗುರುವಾರ ನಮ್ಮ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತವಾಗಿರುತ್ತದೆ. ಇಸಿಜಿ, ಎಕ್ಸ್ ರೇ, ಅಲ್ಟಾಸೌಂಡ್ ಸ್ಕ್ಯಾನಿಂಗ್, ಯೂರಾಲಜಿ ಕನ್ಸಲೇಷನ್, ಸಿಆರ್‌ಎಂ ಸ್ಕ್ಯಾನ್, ಮೂತ್ರಪಿಂಡದ ಕಲ್ಲಿನ ಸ್ಕ್ಯಾನ್, ಇಸಿಜಿ, ಬಿಪಿ, ಶುಗರ್ ಟೆಸ್ಟಿಂಗ್ ಉಚಿತ ವಾಗಿರುತ್ತದೆ. ಬಾಕಿ ದಿನಗಳಲ್ಲಿ ಸುಮಾರು 3000 ರೂ.ಗಳ ಈ ತಪಾಸಣೆ ನಮ್ಮ ಆಸ್ಪತ್ರೆಯಲ್ಲಿ ಕೇವಲ 300 ರೂ.ಗಳಿಗೆ ಮಾಡುತ್ತೇವೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ. ಸೇವೆಯ ಉದ್ದೇಶದಿಂದ ಮಾತ್ರ ಇದನ್ನು ಮಾಡ ಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಇ-ಶ್ರವರ್ ಕಾರ್ಡ್ ವಿತರಿಸಲಾಯಿತು. ನೂರಾರು ಕಾರ್ಮಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಅಸಂಘಟಿತಮತ್ತು ಕಟ್ಟಡ ಕಾರ್ಮಿಕರ ಒಕ್ಕೂಟದ ಪ್ರಮುಖರಾದ ಪೆರುಮಾಳ್, ಸುಂದರೇಶ್ ಬಾಬು, ಹಸೂಡಿ ಸಂಜಯ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ರವಿಚಂದ್ರ, ಮಂಜುನಾಥ, ವಿನ್ಸೆಂಟ್ ರೋಡ್ರಿಗಸ್, ಕಾರ್ಮಿಕ ಅಧಿಕಾರಿಗಳಾದ ಸುಚಿತಾ ಮತ್ತು ಕೃಷ್ಣ ಮತ್ತಿತರರಿದ್ದರು.

Share198Tweet124

Search

No Result
View All Result

Recent News

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ

Nammura Suddi

ನಮ್ಮೂರ ಸುದ್ದಿ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಜಗತ್ತಿನ ಪ್ರಮುಖ ಸುದ್ದಿಗಳನ್ನು ನಿಖರವಾಗಿ ತಲುಪಿಸುತ್ತದೆ.
ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ನಮ್ಮೂರಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇವೆ.
ಸತ್ಯ ಮತ್ತು ನಿಷ್ಪಕ್ಷಪಾತತೆಯೇ ನಮ್ಮ ಗುರುತು.

Recent News22

  • ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ
  • ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!
  • ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ
  • ಮಹಿಳಾ ಮೀಸಲಾತಿ ಸಂಭ್ರಮದ ಕ್ಷಣ: ಮಾಳವಿಕಾ ಅವಿನಾಶ್
  • “ರುದ್ರ ಕಾಲ” ಚಿತ್ರಕ್ಕೆ ದಿಗಂತ್ ನಾಯಕ ‌ ‌‌‌

Quick Links

dfef
  • About Us
  • Contact us
  • Terms and Conditions
  • Privacy policy

© 2026 Nammura Sudhi. All Rights Reserved. Developed by Onecorpus Techworks

No Result
View All Result
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ

© 2026 Nammura Sudhi. All Rights Reserved. Developed by Onecorpus Techworks