
ವಿಜಯಪುರ : ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 340 ಮೊಬೈಲ್ ಗಳನ್ನ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ…ಹೌದು ಅಂದಾಜು 3 ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ಗಳನ್ನು ಪತ್ತೆ ಮಾಡಿದ್ದಾರೆ, ಯಾವುದೇ ಉಪಯೋಗಿಸಿದ ಮೊಬೈಲನ್ನು ಖರೀದಿಸುವಾಗ ಸೂಕ್ತ ದಾಖಲೆಗಳು ಇದ್ದಲ್ಲಿ ಮಾತ್ರ ಖರೀದಿಗೆ ಮುಂದಾಗಿ ಮತ್ತು ಸಂಚಾರಿ ಸಾಥಿ ಆಪ್ ಮೂಲಕ ಮೊಬೈಲ್ ಮಾಲೀಕರ ದಾಖಲಾತಿ ಪರಿಶೀಲಿಸಿ ಖರೀದಿಸಿ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು..ಒಟ್ಟು ಜಿಲ್ಲೆಯ 26 ಠಾಣೆಗಳಿಂದ 340 ಮೊಬೈಲ್ಗಳು CEIR ಮೂಲಕ 340 ಮೊಬೈಲ್ಗಳನ್ನ ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರ ಮಾಡಿದರು…ಬಸವನ ಬಾಗೇವಾಡಿ, ಇಂಡಿ, ವಿಜಯಪುರ ನಗರ, ವಿಜಯಪುರ ಗ್ರಾಮೀಣ ಸೈಬರ್ ಠಾಣಾ ವ್ಯಾಪ್ತಿಯ ಉಪ ವಿಭಾಗದ 26 ಠಾಣೆಗಳ ಪೊಲೀಸರಿಂದ ನಡೆದಿದ್ದ ಕಾರ್ಯಾಚರಣೆಯಲ್ಲಿ ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ವಿಜಯಪುರ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ…