testtest second

test content
  • About
  • Advertise
  • Privacy & Policy
Friday, April 10, 2026
Retail
Advertisement
Advertise
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
No Result
View All Result
Namu
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
Nammura Suddi
Home Blog

ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ: ಡಿ.ಎಸ್‌ ರಮೇಶ್

by nammurasuddi Online
April 10, 2026
in Blog
0

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಾಲದ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರವಾಹ, ನೀರು ನಿಲ್ಲುವ ಸಮಸ್ಯೆಗಳು ಹಾಗೂ ಮೂಲಸೌಕರ್ಯ ತೊಂದರೆಗಳನ್ನು ಸಮರ್ಥವಾಗಿ ನಿಭಾಯಿಸು ಉದ್ದೇಶದಿಂದ ಪೂರ್ವ ನಗರ ಪಾಲಿಕೆ *ಆಯುಕ್ತರಾದ ಡಿ.ಎಸ್.ರಮೇಶ್* ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಮಳೆಗಾಲದ ಪೂರ್ವಸಿದ್ಧತೆ, ವಿಪತ್ತು ನಿರ್ವಹಣೆ, ಇಲಾಖೆಗಳ ಸಮನ್ವಯ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.*ಸಭೆಯಲ್ಲಿ ಚರ್ಚಿಸಲಾದ ಅಂಶಗಳು**ವಿಪತ್ತು ನಿರ್ವಹಣೆ ಸಮನ್ವಯ ತಂಡಗಳ ರಚನೆ**ಮಳೆಗಾಲದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು:*• ನಗರ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ವಿಭಾಗ ಹಾಗೂ ಎಸ್‌.ಡಿ.ಆರ್.ಎಫ್ ಸಿಬ್ಬಂದಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಸಮನ್ವಯ ತಂಡಗಳನ್ನು ರಚಿಸುವಂತೆ ಸೂಚಿಸಲಾಯಿತು.• ಪ್ರತಿ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಿ 24×7 ಮಾನಿಟರಿಂಗ್ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಯಿತು.• SDRF/NDRF ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸಿ ತುರ್ತು ಪ್ರತಿಕ್ರಿಯೆಗೆ ಸಜ್ಜಾಗಿರಲು ಸೂಚಿಸಲಾಯಿತು.*ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಕ್ರಮಗಳಿಗೆ ಸೂಚನೆ*ಪೂರ್ವ ನಗರ ಪಾಲಿಕೆಯ ಪ್ರಮುಖ ಪ್ರವಾಹ ಪೀಡಿತ ಪ್ರದೇಶಗಳಾದ ಸರ್ಜಾಪುರ ಮುಖ್ಯ ರಸ್ತೆ (ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ), ಗೆದ್ದಲಹಳ್ಳಿ, ಸಾಯಿಲೇಔಟ್, ವಡ್ಡರಪಾಳ್ಯ (ರೈಲ್ವೆ ಟ್ರ್ಯಾಕ್ ಪ್ರದೇಶ),ಪೈ ಲೇಔಟ್,ಮುನ್ನೇಕೊಳಾಲು, ದೊಡ್ಡನೆಕ್ಕುಂದಿ, ಬೆಳ್ಳತ್ತೂರು,ಪಣತ್ತೂರು ರೈಲ್ವೆ ಬ್ರಿಡ್ಜ್, ಶಿವಗಂಗಾ ಬಡಾವಣೆ,ಚಲ್ಲಘಟ್ಟ, ಯಮಲೂರು, ಕಾಡುಗೋಡಿ, ಚನ್ನಸಂದ್ರ ಮುಖ್ಯರಸ್ತೆ ಮುಂತಾದ ಕಡೆಗಳಲ್ಲಿ ರಾಜಕಾಲುವೆ ಮತ್ತು ಚರಂಡಿಗಳಲ್ಲಿ ಜಮಾಯಿಸಿರುವ ಮಣ್ಣು, ಹೂಳು, ಪ್ಲಾಸ್ಟಿಕ್, ಘನತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳ ತೆರವುಗೊಳಿಸಿ ಮಳೆ ನೀರಿನ ಸರಾಗ ಹರಿವಿಗೆ ಕ್ರಮವಹಿಸಲು ಹಾಗೂ ತಗ್ಗು ಪ್ರದೇಶಗಳಲ್ಲಿ ಡ್ರೈನೇಜ್ ಸಂಪರ್ಕ ಸುಧಾರಣೆಗೆ ಏಪ್ರಿಲ್‌ 15ರೊಳಗೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.*ರಾಜಕಾಲುವೆ ಅಭಿವೃದ್ಧಿ, ಒತ್ತುವರಿ ತೆರವು ಮತ್ತು ಇನ್ನಿತರೆ ತಾಂತ್ರಿಕ ಕ್ರಮಗಳು*• ಮುನ್ನೇಕೊಳಾಲು, ದೊಡ್ಡನೆಕ್ಕುಂದಿ, ಫರ್ನ್ ಸಿಟಿ, ಚಲ್ಲಘಟ್ಟ, ಯಮಲೂರು ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚಿಸಲಾಯಿತು.• ಅಭಿವೃದ್ದಿಗೆ ಬಾಕಿ ಇರುವ ಕಚ್ಚಾ ಕಾಲುವೆಗಳನ್ನು ಕಂದಾಯ ನಕ್ಷೆಯ ಆಧಾರದ ಮೇಲೆ ಅಲೈನ್‌ಮೆಂಟ್ ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.• ವಿಶ್ವಬ್ಯಾಂಕ್ ಅನುದಾನದಡಿ ಕೈಗೊಂಡಿರುವ ವಿವಿಧ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸೂಚಿಸಲಾಯಿತು.• ವಿಶೇಷ ತಾಂತ್ರಿಕ ಕ್ರಮಗಳಾದ ಪೈ ಲೇಔಟ್‌ನಲ್ಲಿ ನಾನ್-ರಿಟರ್ನ್ ವಾಲ್ವ್ ಅಳವಡಿಕೆ, ಮುನ್ನೇಕೊಳಾಲು ಪ್ರದೇಶದಲ್ಲಿ ಸ್ವಯಂಚಾಲಿತ ಪಂಪಿಂಗ್ ವ್ಯವಸ್ಥೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ಅಪಾಯಕಾರಿ ನೀರಿನ ಮಟ್ಟದ ಗುರುತಿಸುವಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಯಿತು.*ಕಾಲುವೆಗಳು, ಚರಂಡಿ ಮತ್ತು ರಸ್ತೆ ನಿರ್ವಹಣಾ ಕಾರ್ಯಗಳು*ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ • ಎಲ್ಲಾ ಪ್ರಾಥಮಿಕ, ದ್ವಿತೀಯ, ತೃತೀಯ ಚರಂಡಿಗಳಲ್ಲಿ, ಡೀಸಿಲ್ಟಿಂಗ್ ಕಾರ್ಯ ಪೂರ್ಣಗೊಳಿಸುವುದು.• ರಸ್ತೆ ಬದಿ ಚರಂಡಿ, ಗ್ರೇಟಿಂಗ್‌ಗಳ ಸ್ವಚ್ಛತೆ ಕಾರ್ಯ ನಡೆಸುವುದು.• ಸಿಎಂಐಡಿಪಿ ಮತ್ತಿ ಎಸ್.ಎಸ್.ಐ.ಪಿ ಅನುದಾನದಡಿ ಕೈಗೊಂಡಿರುವ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ದಿ ಕಾಮಗಾರಿಗಳು ಹಾಗೂ ಮಳೆನೀರು ರಾಜಕಾಲುವೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಏಪ್ರಿಲ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು.• ವೈಟ್ ಟಾಪಿಂಗ್ ರಸ್ತೆಗಳಲ್ಲಿ ಪೈಪ್ ಡ್ರೈನ್ ಮತ್ತು ಸಿಲ್ಟ್ ಚೇಂಬರ್ ನಿರ್ಮಾಣ ಪೂರ್ಣಗೊಳಿಸುವುದು*ಜಲಮಂಡಳಿ ಮತ್ತು ಬೆಸ್ಕಾಂ ಜವಾಬ್ದಾರಿಗಳು**ಜಲಮಂಡಳಿ:*• ಮಳೆಗಾಲದಲ್ಲಿ ಉಕ್ಕಿ ಹರಿಯುವ ಒಳಚರಂಡಿ ಗುರುತಿಸಿ ಪೂರ್ವಭಾವಿಯಾಗಿ ಸ್ವಚ್ಛಗೊಳಿಸುವುದು.• ಮುರಿದ ಚೇಂಬರ್ ಒಳಚರಂಡಿ ಮುಚ್ಚಳಗಳ ಬದಲಾವಣೆ ಮಾಡುವುದು.• ಮಳೆ ನೀರಿನಿಂದಾಗಿ ಒಳಚರಂಡಿ ಒತ್ತಡ ಕಡಿಮೆ ಮಾಡಲು ಇನ್ನಿತರೆ ಕ್ರಮಗಳು ಅನುಸರನೆ ಮಾಡುವುದು.*ಬೆಸ್ಕಾಂ & ಅರಣ್ಯ ವಿಭಾಗ:*• ಒಣಗಿರುವ ಹಾಗೂ ಅಪಾಯಕಾರಿ ಮರದ ರೆಂಬೆ ಕೊಂಬೆಗಳ ತೆರವಿಗೆ ಕ್ರಮವಹಿಸುವುದು.• ವಿದ್ಯುತ್ ವ್ಯತ್ಯಯ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು.• ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆಗೆ ವ್ಯವಸ್ಥೆ ಕಲ್ಪಿಸುವುದು.*ಕೆರಗಳಲ್ಲಿ ಮಳೆ ನೀರು ಸಂಗ್ರಹ ಮತ್ತು ಸರಾಗ ಹರಿವಿಗೆ ವ್ಯವಸ್ಥೆ* • ಕೆರೆಗಳ ಇನ್‌ ಲೆಟ್ ಮತ್ತು ಔಟ್‌ಲೆಟ್ ಗಳಲ್ಲಿ ಮಳೆ ನೀರು ಸರಾಗ ಹರಿವಿಗೆ ಸ್ವಚ್ಛತೆ ಕಾಪಾಡುವುದು.• ಒಳಚರಂಡಿ ನೀರವು ಕೆರೆಗೆ ಹರಿಯದಂತೆ ಡೈವರ್ಟ್‌ ಡ್ರೈನ್ಗಳ ವ್ಯವಸ್ಥೆ ರೂಪಿಸುವುದು.• ಸೌಳು ಕೆರೆ ಬಫರ್ ವಲಯದಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ.*ಸಂಚಾರ ನಿರ್ವಹಣೆ ಮತ್ತು ಸಾರ್ವಜನಿಕ ಸುರಕ್ಷತೆ*• ಪ್ರಮುಖ ರಸ್ತೆಗಳು ಸೇರಿದಂತೆ ನೀರು ನಿಲ್ಲುವ ರಸ್ತೆಗಳನ್ನು ಗುರುತಿಸಲು ಸಂಚಾರ ಪೊಲೀಸರೊಂದಿಗೆ ಸಮನ್ವಯ ಹಾಗೂ ಸೂಕ್ತ ಪರಿಹಾರ ಕ್ರಮಕ್ಕೆ ಆದ್ಯತೆ ನೀಡುವುದು.• ಮಳೆಗಾಲದಲ್ಲಿ ಅಂಡರ್‌ಪಾಸ್‌ಗಳಲ್ಲಿ ಅಪಾಯಕಾರಿ ನೀರಿನ ಮಟ್ಟ ಸೂಚಕ ಗುರುತುಗಳ ಅಳವಡಿಕೆ ಹಾಗೂ ಸಂಚಾರ ನಿಯಂತ್ರಣಕ್ಕೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.*ತುರ್ತು ಉಪಕರಣಗಳನ್ನು ಸನ್ನದ್ದ ಸ್ಥಿತಿ*ವಿಪತ್ತು ನಿರ್ವಹಣೆಗೆ ಕೆಳಕಂಡ ಉಪಕರಣಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಲಾಗುವಂತೆ ಸೂಚಿಸಲಾಯಿತು.• ಡೀ-ವಾಟರಿಂಗ್ ಪಂಪ್‌ಗಳು• ಜೆಟ್ಟಿಂಗ್/ಸಕ್ಕಿಂಗ್ ಯಂತ್ರಗಳು• ಜೆಸಿಬಿ, ಟಿಪ್ಪರ್, ಟ್ರಾಕ್ಟರ್‌ಗಳು• ಸುರಕ್ಷತಾ ಉಪಕರಣಗಳು• ಟಾರ್ಚ್‌, ಎಲೆಕ್ಟ್ರಿಕ್‌ ಗರಗಸ ಇನ್ನಿತರೆ ಉಪಕರಣಗಳುಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ತಡೆಗೆ ಸಮಗ್ರ, ಬಹು-ವಿಭಾಗೀಯ ಹಾಗೂ ಸಮಯಬದ್ಧ ಕಾರ್ಯಯೋಜನೆ ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಸಹ ಕಾಲುವೆ ಮತ್ತು ಚರಂಡಿಗಳಲ್ಲಿ ಕಸ ಹಾಕದಂತೆ, ಕೆರೆ-ಕಾಲುವೆಗಳನ್ನು ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಹಾಗೂ ತುರ್ತು ಸಂದರ್ಭಗಳಲ್ಲಿ ನಗರ ಪಾಲಿಕೆಯ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನಗರದ ಸುರಕ್ಷತೆ ಮತ್ತು ಸ್ವಚ್ಛತೆಯಲ್ಲಿ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದರು.ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್‌ ಸುಧಾಕರ್‌, ಮುಖ್ಯ ಅಭಿಯಂತರರಾದ ಎಂ.ಲೋಕೇಶ್‌ ಮತ್ತು ಕೃಷ್ಣಮೂರ್ತಿ, ಜಯಶಂಕರ್‌, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್, ಅರಣ್ಯ ಇಲಾಖೆ, ರೈಲ್ವೆ ಇಲಾಖೆ, ವಿಪತ್ತು ನಿರ್ವಹಣಾ ಘಟಕ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.

YOU MAY ALSO LIKE

ವಿಜಯಪುರ ಪೋಲಿಸರ ಭರ್ಜರಿ ಕಾರ್ಯಾಚರಣೆ ; ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ವಶಕ್ಕೆ..!

ನಾಡೋಜ ಡಾ.ಎಸ್.ಆರ್.ರಾಮಸ್ವಾಮಿಗಳ ನಿಧನಕ್ಕೆ ವಿಜಯೇಂದ್ರ ಸಂತಾಪ

Share196Tweet123
Nammura Suddi

ನಮ್ಮೂರ ಸುದ್ದಿ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಜಗತ್ತಿನ ಪ್ರಮುಖ ಸುದ್ದಿಗಳನ್ನು ನಿಖರವಾಗಿ ತಲುಪಿಸುತ್ತದೆ.
ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ನಮ್ಮೂರಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇವೆ.
ಸತ್ಯ ಮತ್ತು ನಿಷ್ಪಕ್ಷಪಾತತೆಯೇ ನಮ್ಮ ಗುರುತು.

Recent News

  • ವಿಜಯಪುರ ಪೋಲಿಸರ ಭರ್ಜರಿ ಕಾರ್ಯಾಚರಣೆ ; ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ವಶಕ್ಕೆ..!
  • ನಾಡೋಜ ಡಾ.ಎಸ್.ಆರ್.ರಾಮಸ್ವಾಮಿಗಳ ನಿಧನಕ್ಕೆ ವಿಜಯೇಂದ್ರ ಸಂತಾಪ
  • ತಕ್ಷಣ ಕನಿಷ್ಟ ವೇತನ ಪರಿಷ್ಕರಿಸಲು ಒತ್ತಾಯಿಸಿ ಪ್ರತಿಭಟನೆ…
  • ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ: ಡಿ.ಎಸ್‌ ರಮೇಶ್
  • About
  • Advertise
  • Privacy & Policy

© 2026 Nammura Sudhi. All Rights Reserved. Developed by Onecorpus Techworks

No Result
View All Result
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ

© 2026 Nammura Sudhi. All Rights Reserved. Developed by Onecorpus Techworks