testtest second

test content
  • About Us
  • Contact us
  • Terms and Conditions
  • Privacy policy
Tuesday, June 9, 2026
Retail
Advertisement
Advertise
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
No Result
View All Result
Namu
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
Nammura Suddi
Home Blog

ನಾಲ್ಕು ದಿನಗಳ ಕಾಲ ಪುಸ್ತಕ ಮೇಳ ; ಬುದ್ಧ, ಬಸವ , ಅಂಬೇಡ್ಕರ್ ಅವರ ಜ್ಞಾನ ಭಂಡಾರ.!

by nammurasuddi Online
April 6, 2026
in Blog

YOU MAY ALSO LIKE

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ವಿಜಯಪುರ : ಸಮಸಮಾಜದ ಕನಸು ಕಂಡವರು , ಭಾರತದ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಧಿಕ್ಕರಿಸಿದವರು , ಜಾತಿ ತಾರತಮ್ಯವನ್ನು ಅಳಿಸಿಹಾಕಿ ಮನುಷ್ಯರೆಲ್ಲ ಒಂದೇ ಎಂದು ಸಾರಿದ ಧೀಮಂತ ನಾಯಕ ಮೇಲು ಕೀಳಿನ ಅಸಮಾನತೆಯ ಸಮಾಜದಲ್ಲಿ ಸಮಾನತೆಯನ್ನು ತರುವುದಕ್ಕಾಗಿ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ವಿಜಯಪುರ ನಗರದಲ್ಲಿ ನಾಲ್ಕು ದಿನಗಳ ಕಾಲ ಪುಸ್ತಕ ಮೇಳ ನಡೆಯಲಿದೆ…ಹೌದು ಬುದ್ಧ ಜಯಂತಿ ಬೌದ್ಧರಿಗೆ, ಬಸವ ಜಯಂತಿಯು ಲಿಂಗಾಯತರಿಗೆ ಬಸವಣ್ಣ ಎಲ್ಲ ಜಾತಿ ಜನಾಂಗದವರಿಗೆ ಇಷ್ಟಲಿಂಗವನ್ನು ಕೊಟ್ಟವರು. ಲಿಂಗವನ್ನು ಪೂಜೆ ಮಾಡುವವರು ಲಿಂಗಾಯತರು. ಆದರೆ ಈಗ ಲಿಂಗಾಯತವೇ ಒಂದು ಜಾತಿಯಾಗಿ ಮಾರ್ಪಟ್ಟಿದೆ , ಬಾಬಾಸಾಹೇಬರ ಜಯಂತಿ ಕೇವಲ ದಲಿತರಿಗೆ ಸೀಮಿತವಾಗಿಬಿಟ್ಟಿದೆ. ಇದನ್ನು ಮೀರಿ ವಿಜಯಪುರದ ಮೇ ಸಾಹಿತ್ಯ ಬಳಗವು ಈ ಮೂವರೂ ಮಹಾಪುರುಷರ ಜನ್ಮದಿನಗಳನ್ನು ವಿಶಿಷ್ಡ ರೀತಿಯಲ್ಲಿ ಆಚರಿಸಲು ಮುಂದಾಗಿದ್ದು ಬುದ್ಧ ಎಂದರೆ ವಿಜ್ಞಾನ, ಬಸವ ಎಂದರೆ ಕಾಯಕ-ದಾಸೋಹ, ಬಾಭಾಸಾಹೇಬರೆಂದರೆ ಜ್ಞಾನದ ಪ್ರವಾಹ ಇದ್ದಂತೆ ಜ್ಞಾನದ ಪ್ರವಾಹದಲ್ಲಿ ಈಜಿದವರು ಮಾತ್ರ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯ , ಹಾಗಾಗಿ ನಾಡಿನ ಜ್ಞಾನ-ವಿಜ್ಞಾನ ದಾಸೋಹ ಎಲ್ಲರಿಗೂ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ‘ಮೇ ಸಾಹಿತ್ಯ ಬಳಗ’ ಬುದ್ಧ ಬಸವ ಬಾಬಾಸಾಹೇಬರ ಚಿಂತನೆಗಳನ್ನು ಸಮಾಜಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಐತಿಹಾಸಿಕ ವಿಜಯಪುರ ನಗರದಲ್ಲಿ ನಾಲ್ಕು ದಿನಗಳ ಕಾಲ ಬೃಹತ್ ಪುಸ್ತಕ ಮೇಳವನ್ನು ಏಪ್ರಿಲ್ 10 ರಿಂದ 14 ವರೆಗೆ ಹಮ್ಮಿಕೊಂಡಿದೆ , ಇದು ಕೇವಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಲ್ಲ. ಇದೊಂದು ಸಾಂಸ್ಕೃತಿಕ ಮೇಳ. ನಾಲ್ಕು ದಿನಗಳ ಕಾಲ ಈ ಮೂವರು ಮಹಾಪುರುಷರು ಮಾತ್ರವಲ್ಲದೆ ಫುಲೆ, ಶಾಹು, ಪೆರಿಯಾರ್, ನಾರಾಯಣಗುರು, ಲೋಹಿಯಾರಂಥ ಸಮಾಜ ಚಿಕಿತ್ಸಕರ ಚಿಂತನೆಗಳ ಕಾರ್ಯಾಗಾರ ನಡೆಯಲಿದೆ. ಬಹುಮುಖ್ಯವಾಗಿ ಎಲ್ಲಾ ಜಾತಿ ಜನಾಂಗದವರ ಒಳಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಪುಸ್ತಕ ಮೇಳದ ನೆಪದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ವರ್ಗಗಳ ಸಾಮಾಜಿಕ ಉನ್ನತಿಗಾಗಿ ಚಿಂತನೆ ನಡೆಯಲಿದೆ. ಡಿಜಿಟಲ್ ಯುಗದಲ್ಲಿ ಮಗ್ನವಾಗಿರುವ ಯುವ ಸಮುದಾಯಕ್ಕೆ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ, ಮತ್ತೆ ಅವರ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ಪ್ರಯತ್ನವಾಗಿದ್ದು ಅಳಿವಿನ ಅಂಚಿನಲ್ಲಿರುವ ಪುಸ್ತಕ ಸಂಸ್ಕೃತಿಯನ್ನು ಮರುಸ್ಥಾಪಿಸುವ ಪ್ರಯತ್ನಕ್ಕೆ ನಾವೆಲ್ಲರೂ ಸಾಕ್ಷಿಯಾಗೋಣ , ಮೇ ಸಾಹಿತ್ಯ ಬಳಗದ ಸಣ್ಣ ಪ್ರಯೋಗದಲ್ಲಿ ಕೈಜೋಡಿಸಿ ನಾಲ್ಕು ದಿನಗಳು ಜೊತೆಯಾಗಿರೋಣ ಏಪ್ರಿಲ್ 10 ರಿಂದ 14ದರ್ಬಾರ್ ಹೈಸ್ಕೂಲ್ ಮೈದಾನ, ವಿಜಯಪುರ…

Share200Tweet125

Search

No Result
View All Result

Recent News

ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ

ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ

Nammura Suddi

ನಮ್ಮೂರ ಸುದ್ದಿ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಜಗತ್ತಿನ ಪ್ರಮುಖ ಸುದ್ದಿಗಳನ್ನು ನಿಖರವಾಗಿ ತಲುಪಿಸುತ್ತದೆ.
ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ನಮ್ಮೂರಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇವೆ.
ಸತ್ಯ ಮತ್ತು ನಿಷ್ಪಕ್ಷಪಾತತೆಯೇ ನಮ್ಮ ಗುರುತು.

Recent News22

  • ವಿಜಯಪುರದಲ್ಲಿ ಬುದ್ಧ ಜಯಂತಿ ಆಚರಣೆ
  • ಪ್ರಿಯಾಂಕಾ ಬನಸೋಡೆ ಪಿಎಚ್‌ಡಿ ಪದವಿ ಪ್ರದಾನ..!
  • ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗಲೂ ಎಚ್ಚರದಿಂದಿರಲು ಶಾಸಕರಿಗೆ ಸಲಹೆ
  • ಮಹಿಳಾ ಮೀಸಲಾತಿ ಸಂಭ್ರಮದ ಕ್ಷಣ: ಮಾಳವಿಕಾ ಅವಿನಾಶ್
  • “ರುದ್ರ ಕಾಲ” ಚಿತ್ರಕ್ಕೆ ದಿಗಂತ್ ನಾಯಕ ‌ ‌‌‌

Quick Links

dfef
  • About Us
  • Contact us
  • Terms and Conditions
  • Privacy policy

© 2026 Nammura Sudhi. All Rights Reserved. Developed by Onecorpus Techworks

No Result
View All Result
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ

© 2026 Nammura Sudhi. All Rights Reserved. Developed by Onecorpus Techworks