testtest second

test content
  • About
  • Advertise
  • Privacy & Policy
Friday, April 10, 2026
Retail
Advertisement
Advertise
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
No Result
View All Result
Namu
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ
Nammura Suddi
Home Blog

ಏಪ್ರಿಲ್ 15ಕ್ಕೆ ಟೊವಿನೋ ಥಾಮಸ್ – ಕಯಾದು ಲೋಹರ್ ಅಭಿನಯದ ‘ಪಳ್ಳಿ ಚಟ್ಟಂಬಿ’ ತೆರೆಗೆ

by nammurasuddi Online
April 9, 2026
in Blog
0

ಮಲಯಾಳಂ ನಟ ಟೊವಿನೋ ಥಾಮಸ್ ಹಾಗೂ ಕನ್ನಡದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಯಾದು ಲೋಹರ್ ಅಭಿನಯದ ‘ಪಳ್ಳಿ ಚಟ್ಟಂಬಿ’ ಸಿನಿಮಾ ಏಪ್ರಿಲ್ 15ರಂದು ತೆರೆಗೆ ಬರಲು ಸಿದ್ಧವಾಗಿದೆ. ಮಲಯಾಳಂ ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ. ಇತ್ತೀಚೆಗೆ ಸಿನಿಮಾ ತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಿತು. ‘ಪಳ್ಳಿ ಚೆಟ್ಟಂಬಿ’ ಚಿತ್ರವನ್ನು ವರ್ಲ್ಡ್ ವೈಡ್ ಫಿಲಂಸ್, ಸಿ ಕ್ಯೂಬ್ ಬ್ರೋಸ್ ಎಂಟರ್ಟೇನ್ಮೆಂಟ್ ಅಡಿಯಲ್ಲಿ ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ. ಡಿಜೋ ಜೊಸೆ ಆಂಟೋನಿ ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಕರ್ನಾಟಕದಲ್ಲಿ ಈ ಚಿತ್ರದ ಹಂಚಿಕೆ ಹಕ್ಕನ್ನು ಪಡೆದುಕೊಂಡಿದೆ. ಸಿನಿಮಾ ಬಗ್ಗೆ ಹಾಗೂ ಬೆಂಗಳೂರಿನ ಕನೆಕ್ಷನ್ ಬಗ್ಗೆ ಟೊವಿನೋ ಥಾಮಸ್ ಮಾತನಾಡಿದರು. ‘ನನ್ನ ಸಿನಿಮಾಗಳು ಕರ್ನಾಟಕದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ನೀವು ನನ್ನ ಸಿನಿಮಾಗಳಿಗೆ ಸಾಕಷ್ಟು ಪ್ರೀತಿ ತೋರಿಸಿದ್ದೀರಿ. ಕರ್ನಾಟಕ ನನಗೆ ಹೊಸದಲ್ಲ. ಬಾಲ್ಯದಿಂದಲೂ ನಾನು ಇಲ್ಲಿ ಬರುತ್ತಿದ್ದೇನೆ. ನಮ್ಮ ಶಾಲಾ ದಿನಗಳಲ್ಲಿ ಪ್ರವಾಸಕ್ಕೆಂದು ಬೆಂಗಳೂರು ಹಾಗೂ ಮೈಸೂರಿಗೆ ಕರೆದುಕೊಂಡು ಬರುತ್ತಿದ್ದರು. ನನ್ನ ಗೆಳೆಯರು ಇಲ್ಲಿ ಓದಿದ್ದಾರೆ. ಆಗ ಬಂದು ನಾನು ಇಲ್ಲಿ ಉಳಿದುಕೊಳ್ಳುತ್ತಿದ್ದೆ. “ಡಿಯರ್ ಫ್ರೆಂಡ್” ಸಿನಿಮಾದ ಶೂಟ್ ಇಲ್ಲೇ ನಡೆದಿತ್ತು. ಆಗ ಒಂದು ತಿಂಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ. ಆಗ ಇಲ್ಲಿನ ಫುಡ್ ಅನ್ನು ಎಂಜಾಯ್ ಮಾಡಿದೆ. ‘ಪಳ್ಳಿ ಚಟ್ಟಂಬಿ’ಗೂ ನಿಮ್ಮೆಲ್ಲರ ಪ್ರೀತಿ ಕೊಡಿ’ ಎಂದರು. ‘ಈ ಸಿನಿಮಾ ಆರಂಭಿಸಿದ್ದು ಸಾಕಷ್ಟು ಹಿಂದೆಯೇ. ಚಿತ್ರದ ಶೂಟಿಂಗ್ ಹಿಂದಿನ ವರ್ಷ ನಡೆಯಿತು. ನಿಮಗೆ ಸಿನಿಮಾ ಇಷ್ಟ ಆಗುತ್ತದೆ ಎಂಬುದು ನನ್ನ ಭಾವನೆ ಎಂದು ಟೊವಿನೋ ಹೇಳಿದರು. ಇದೇ ವೇಳೆ ಕನ್ನಡದ ಬಗ್ಗೆಯೂ ಅವರು ಮಾತನಾಡಿದರು. ‘ನಾವು ಕೇವಲ ನೆರೆಹೊರೆಯವರಲ್ಲ, ನಾವು ರಕ್ತ ಸಂಬಂಧಿಗಳು. ದಕ್ಷಿಣದ ಎಲ್ಲಾ ಭಾಷೆಗಳ ಮಧ್ಯೆ ಸಾಮ್ಯತೆ ಇದೆ’ ಎಂದು ಖುಷಿಯಿಂದ ಹೇಳಿದರು. ಈ ಸಿನಿಮಾದಲ್ಲಿ ಕರ್ನಾಟಕದ ಕಲೆ ಯಕ್ಷಗಾನದ ಬಳಕೆ ಕೂಡ ಆಗಿದೆ ಎಂಬುದು ವಿಶೇಷ. ಹೀಗಾಗಿ, ಕನ್ನಡದ ಸಂಭಾಷಣೆ ಕೂಡ ಸಿನಿಮಾದಲ್ಲಿ ಬರುತ್ತದೆ ಎಂದು ಟೊವಿನೋ ಥಾಮಸ್ ಮಾಹಿತಿ ಹಂಚಿಕೊಂಡರು. ಈ ಚಿತ್ರದ ನಿರ್ದೇಶಕ ಡಿಜೋ ಜೊಸೆ ಆಂಟೋನಿ ಅವರು ‘ಜನ ಗಣ ಮನ’ ರೀತಿಯ ಸಿನಿಮಾಗಳನ್ನು ನೀಡಿದವರು. ಅವರು ಈಗ ಒಂದು ಹಳ್ಳಿಯ ಕಥೆಯನ್ನು ಹಿಡಿದು ಬಂದಿದ್ದಾರೆ. ‘ಪಳ್ಳಿ ಚಟ್ಟಂಬಿ’ ಪಾತ್ರದಲ್ಲಿ ನನ್ನ ಗೆಳೆಯ ಟೊವಿನೋ ನಟಿಸಿದ್ದಾರೆ. ರೆಬೇಕಾ ಪಾತ್ರದಲ್ಲಿ ಕಯಾದು ಅಭಿನಯಿಸಿದ್ದಾರೆ. 2018ರಲ್ಲಿ ನನ್ನ ಮೊದಲ ಸಿನಿಮಾ ಮಾಡಿದೆ. ಆ ಬಳಿಕ ಈ ಸಿನಿಮಾ ಕೆಲಸ ಆರಂಭಿಸಿದೆ. ಕಥೆ ಕೇಳುತ್ತಿದ್ದಂತೆ ಟೊವಿನೋಗೆ ಕರೆ ಮಾಡಿದೆ. ಅವರು ಮಾಡೋಣ ಎಂದರು. 2026ರ ಏಪ್ರಿಲ್ 15 ರಂದು ಸಿನಿಮಾ ತೆರೆಗೆ ಬರುತ್ತಿದೆ. 1950ರ ಕಾಲಘಟ್ಟದ ಕಥೆ ಸಿನಿಮಾದಲ್ಲಿದೆ. ಇದು ಹಳ್ಳಿಯಲ್ಲಿ ನಡೆಯುವ ಕಥೆ’ ಎಂದರು ನಿರ್ದೇಶಕರು.ಕನ್ನಡದಲ್ಲಿ ‘ಮುಗಿಲ್ ಪೇಟೆ’ ಸಿನಿಮಾ ಮಾಡಿದ್ದ ಕಯಾದು ಲೋಹರ್, ಈಗ ‘ಪಳ್ಳಿ ಚೆಟ್ಟಂಬಿ’ಗೆ ನಾಯಕಿ. ‘ಈ ಸಿನಿಮಾ ವಿಶೇಷ ಸಿನಿಮಾ. ರೆಬೇಕಾ ರೀತಿಯ ಪಾತ್ರ ಮಾಡಬೇಕು ಎಂಬ ಕನಸು ಇತ್ತು. ನಾನು ಶೇ.100ರಷ್ಟು ಶ್ರಮ ಹಾಕಿದ್ದೇನೆ. ‘ಮುಗಿಲ್ ಪೇಟೆ’ ಸಿನಿಮಾ ಮಾಡಿದ್ದೆ. ಅಲ್ಲಿಂದ ನನ್ನ ಪ್ರಯಾಣ ಶುರುವಾಯಿತು. ನನ್ನ ಮೊದಲ ಸಿನಿಮಾಗೆ ತೋರಿಸಿದ ಪ್ರೀತಿಯನ್ನು ಈ ಸಿನಿಮಾಗೂ ತೋರಿಸಿ’ ಎಂದರು.ಈ ಚಿತ್ರಕ್ಕೆ ಎಸ್ ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ, ಜೇಕ್ಸ್ ಬಿಜೋಯ್ ಸಂಗೀತ ಚಿತ್ರಕ್ಕಿದೆ.

YOU MAY ALSO LIKE

ವಿಜಯಪುರ ಪೋಲಿಸರ ಭರ್ಜರಿ ಕಾರ್ಯಾಚರಣೆ ; ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ವಶಕ್ಕೆ..!

ನಾಡೋಜ ಡಾ.ಎಸ್.ಆರ್.ರಾಮಸ್ವಾಮಿಗಳ ನಿಧನಕ್ಕೆ ವಿಜಯೇಂದ್ರ ಸಂತಾಪ

Share198Tweet124

Search

No Result
View All Result

Recent News

ವಿಜಯಪುರ ಪೋಲಿಸರ ಭರ್ಜರಿ ಕಾರ್ಯಾಚರಣೆ ; ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ವಶಕ್ಕೆ..!

April 10, 2026

ನಾಡೋಜ ಡಾ.ಎಸ್.ಆರ್.ರಾಮಸ್ವಾಮಿಗಳ ನಿಧನಕ್ಕೆ ವಿಜಯೇಂದ್ರ ಸಂತಾಪ

April 10, 2026

ತಕ್ಷಣ ಕನಿಷ್ಟ ವೇತನ ಪರಿಷ್ಕರಿಸಲು ಒತ್ತಾಯಿಸಿ ಪ್ರತಿಭಟನೆ…

April 10, 2026
Nammura Suddi

ನಮ್ಮೂರ ಸುದ್ದಿ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಜಗತ್ತಿನ ಪ್ರಮುಖ ಸುದ್ದಿಗಳನ್ನು ನಿಖರವಾಗಿ ತಲುಪಿಸುತ್ತದೆ.
ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ನಮ್ಮೂರಿನ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇವೆ.
ಸತ್ಯ ಮತ್ತು ನಿಷ್ಪಕ್ಷಪಾತತೆಯೇ ನಮ್ಮ ಗುರುತು.

Recent News

  • ವಿಜಯಪುರ ಪೋಲಿಸರ ಭರ್ಜರಿ ಕಾರ್ಯಾಚರಣೆ ; ಮೂರು ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ವಶಕ್ಕೆ..!
  • ನಾಡೋಜ ಡಾ.ಎಸ್.ಆರ್.ರಾಮಸ್ವಾಮಿಗಳ ನಿಧನಕ್ಕೆ ವಿಜಯೇಂದ್ರ ಸಂತಾಪ
  • ತಕ್ಷಣ ಕನಿಷ್ಟ ವೇತನ ಪರಿಷ್ಕರಿಸಲು ಒತ್ತಾಯಿಸಿ ಪ್ರತಿಭಟನೆ…
  • ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ: ಡಿ.ಎಸ್‌ ರಮೇಶ್
  • About
  • Advertise
  • Privacy & Policy

© 2026 Nammura Sudhi. All Rights Reserved. Developed by Onecorpus Techworks

No Result
View All Result
  • ರಾಜ್ಯ
  • ರಾಜಕೀಯ
  • ರಾಷ್ಟ್ರ
  • ಕ್ರೀಡೆ
  • ಜೀವನಶೈಲಿ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಆರೋಗ್ಯ
  • ವಿದೇಶ
  • ವಿಶೇಷ ಕಥೆಗಳು
  • ವ್ಯಾಪಾರ
  • ಶಿಕ್ಷಣ
  • ಸ್ಥಳೀಯ

© 2026 Nammura Sudhi. All Rights Reserved. Developed by Onecorpus Techworks